ಹಲೋ ಗೆಳೆಯರೇ ನಮಸ್ಕಾರ..
ತಮ್ಮೆಲ್ಲರಿಗೂ ಸ್ವಾಗತ, ಸುಸ್ವಾಗತ ನನ್ನ ಬ್ಲಾಗ್ ಗೆ... ನಾ ಇವತ್ತು ನಿಮ್ ಜೊತೆ ಹಂಚಿಕೊಳ್ಳಲು ಹೊರಟಿರುವ ವಿಷಯ "ಹೈನುಗಾರಿಕೆ"
ನಮಗೆ ಮತ್ತು ಎಲ್ಲರಿಗೂ ಒಂದು ಆಸೆ ಇದ್ದೇ ಇರುತ್ತೆ ನಾವು ನಮ್ಮ ಸ್ವಂತ ಬ್ಯುಸಿನೆಸ್ ಮಾಡಬೇಕು ಅಂತ ಆದ್ರೆ ಅದು ಎಲ್ಲರಿಗೂ ಸಾದ್ಯ ಆಗೋಲ್ಲ.. ಯಾಕಂದ್ರೆ...
1. ಕೆಲವೊಬ್ಬರಿಗೆ ದುಡ್ಡು ಇರುತ್ತೆ ಆದ್ರೆ ಟೈಮ್ ಇರೋಲ್ಲ
2. ಕೆಲವೊಬ್ಬರಿಗೆ ಟೈಮ್ ಇರುತ್ತೆ ಆದ್ರೆ ಮಾಡೋಕೆ ದುಡ್ಡು ಇರೋಲ್ಲ
ಅದೇ ಏನೋ ಹೇಳ್ತಾರಲ್ಲ ಹಲ್ಲಿದ್ದೊನಿಗೆ ಕಡಲೆ ಇರೋಲ್ಲ, ಕಡಲೆ ಇದ್ದೊನಿಗೆ ಹಲ್ಲು ಇರೋಲ್ಲ ಅಂತ😜😅
ಏನೋ ಬಿಡಿ ಪಾ ಅವೆಲ್ಲ ಇವಾಗ ಯಾಕೆ.. ನಮ್ಮ ಮುಖ್ಯವಾದ ಟಾಪಿಕ್ ಗೆ ಬರೋಣ..
ಹೈನುಗಾರಿಕೆ :
≠================
1. ಹೌದು ಹೈನುಗಾರಿಕೆ ಲಾಭದಾಯಕ.. ಆದ್ರೆ ಬೇಕಾಗಿರೋದು ಡೆಡಿಕೇಶನ್ ಅಂಡ್ ಪರಿಶ್ರಮ
2. ಇಲ್ಲ ಇಲ್ಲ ಹೈನುಗಾರಿಕೆ ಲಾಭದಾಯಕ ಅಲ್ಲ, ಯಾಕಂದ್ರೆ ಡೆಡಿಕೇಶನ್ ಇಲ್ಲದೆ ಬರೀ blind ಆಗಿ ಸ್ಟಾರ್ಟ್ ಮಾಡೋದ್ರಿಂದ, ನಾವು ಏನೇ ಒಂದು ಬ್ಯುಸಿನೆಸ್ ಮಾಡ್ತೀವಿ ಅಂದ್ರೆ ಮೊದಲು ಪೂರ್ವಸಿದ್ಧತೆ ಬಹಳ ಮುಖ್ಯ
3. ಹಾಗಾದ್ರೆ,, ಎನ್ ಪೂರ್ವಸಿದ್ಧತೆ ಮಾಡ್ಕೋಬೇಕು?
- ಮೊದಲು ನಾವು ತಿಳ್ಕೊಬೇಕಾಗಿರೋದು ರಾಸುಗಳ ಬಗ್ಗೆ ಅಂದ್ರೆ ನಾವು ಯಾವ ರಾಸುಗಳನ್ನು ಸಾಕಬೇಕು ಮತ್ತೆ ಅವುಗಳ ವಿಶೇಷತೆ ಏನು? ಎಷ್ಟು ಹಾಲು ನೀಡುತ್ತೆ? ಯಾವ ರೀತಿ ಅವುಗಳನ್ನ ನೋಡ್ಕೋಬೇಕು ಅಂತ.
- ದನದ ಕೊಟ್ಟಿಗೆ : ಮುಖ್ಯವಾಗಿ ಬೇಕಾಗಿರೋದು ಇದು ಯಾವ ರೀತಿ ನಾವು ಕಟ್ಟ್ಬೇಕು, ಹೇಗೆ ಮತ್ತು ಎಲ್ಲಿ ಯಾಕಂದ್ರೆ ಹಸುಗಳಿಗೆ ಗಾಳಿ ಮತ್ತೆ ಬೆಳಕು ತುಂಬಾ ಮುಖ್ಯ.
- ಹಸುಗಳ ಆಯ್ಕೆ: ಅಂದ್ರೆ ನಾವು ಹಸುಗಳ ಆಯ್ಕೆ ಮಾಡ್ಬೇಕಾದ್ರೆ ಕೆಲವೊಂದು ಸೂಕ್ಷ್ಮತೆ ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಬೇಕು , ಸುಮ್ನೆ ದಲ್ಲಾಳಿ ಜೊತೆ ಸೇರಿ ನಿಮ್ಮ ದುಡ್ಡು ಮತ್ತೆ ಸಮಯ ವ್ಯರ್ಥ ಮಾಡ್ಕೋಬೇಡಿ. ಮೋಸ ಹೋಗೋರು ಇರೋದ್ರಿಂದ ಮೋಸ ಮಾಡೋರು ಇದ್ದೇ ಇರ್ತಾರೆ
4. ದನದ ಕೊಟ್ಟಿಗೆ ನಿರ್ಮಾಣಕ್ಕೆ ತುಂಬಾ ಹಣ ವ್ಯರ್ಥ ಮಾಡಬೇಡಿ ಅದು ಸುಮ್ನೆ dead investment. ಆತೀ ಸಿಂಪಲ್ ಇರಲಿ ನಿಮ್ಮ ಕೊಟ್ಟಿಗೆ ಆದ್ರೆ ಸೆಕ್ಯೂರಿಟಿ measurement ನೀವು ತಗೊಬೇಕಾಗುತ್ತೆ, ಕಳ್ಳರ ಕಾಟ ಜಾಸ್ತಿ ಮಾರಾಯ್ರೆ ಯಾವಾಗ ಎನ್ ಬೇಕಾದ್ರೂ ಆಗಬಹುದು. ನನ್ನ ಪ್ರಕಾರ 5 ಅಡಿ ಕಟ್ಟಡ ಕಟ್ಟಿ ಸುತ್ತ mesh ಉಪಯೋಗ ಮಾಡಿ , ನಮಿಗೆ ಗಾಳಿ ಬೆಳಕು ಬರುತ್ತೆ, ಹಸುಗಳು ಚೆನ್ನಾಗಿ ಇರ್ತವೆ.
5. ಸಾದ್ಯ ಆದ್ರೆ ನಿಮ್ಮ ಹತ್ತಿರದ ಡೈರಿ ಕಾರ್ಯದರ್ಶಿ ಹತ್ರ ಮಾತಾಡಿ ಎಲ್ಲಾದ್ರೂ ಟ್ರೈನಿಂಗ್ ಕೊಡ್ತಿದ್ರೆ ತಗೊಳಿ.
6. ರಬ್ಬರ್ ಮ್ಯಾಟ್ ಬೇಕಾ? : ಇದು depends ನಿಮ್ಮ ಅನುಕೂಲಕ್ಕೆ ತಕ್ಕಂತೆ ಪ್ಲಾನ್ ಮಾಡಿ.
7. ಮೇವು ಕತ್ತರಿಸುವ ಯಂತ್ರ ಬೇಕಾ? No it depends on ಎಷ್ಟು ಆಕಳು ನೀವು ಸಾಕ್ತೀರ ಅನ್ನೋದರ ಮೇಲೆ , ನೀವು ಸದೃಡವಾಗಿದ್ದರೆ starting ನೀವೇ ಮೇವು ಕತ್ತರಿಸಿ but ಇದ್ರಲ್ಲಿ ಸ್ವಲ್ಪ ಮೇವು ವೇಸ್ಟ್ ಆಗುತ್ತೆ.
8. ಹಾಲು ಕರೆಯುವ ಯಂತ್ರ ಬೇಕಾ? Yes ಇದು ಅವಶ್ಯಕ ಯಾಕಂದ್ರೆ 50 ಅಥವಾ 60 ಲೀಟರ್ ಹಾಲು ಕೈಯಿಂದ ಕರೆಯೋದು impossible.
9. Doctor ಬೇಕಲ್ವಾ ಟ್ರೀಟ್ಮೆಂಟ್ ಮಾಡೋಕೆ.. ನಿಮ್ಮ ಹತ್ತಿರದ ಪಶು ಆಸ್ಪತ್ರೆಯ ಡಾಕ್ಟರ್ ಪರಿಚಯ ಮಾಡ್ಕೊಳಿ , ಹೇಗೆ ಇರ್ಬೇಕು ಅಂದ್ರೆ ಅವ್ರು ಫೋನ್ ಮಾಡಿದ ತಕ್ಷಣ ನಿಮಗೆ ಹೆಲ್ಪ್ ಮಾಡಬೇಕು ಆ ರೀತಿ .
10. ಮೇವು : ಮೇವು ತುಂಬಾನೇ ಮುಖ್ಯ, ಸಾದ್ಯ ಆದ್ರೆ ನಿಮ್ಮ ಜಮೀನಿನಲ್ಲೇ ಮೇವನ್ನು ಬಿತ್ತನೆ ಮಾಡ್ಕೊಳಿ, ನಿಮ್ದು ಸ್ವಂತ ಜಾಗ ಇಲ್ಲ ಅಂದ್ರೆ ಹೈಡ್ರೋಫೋನಿಕ್ ಮೊರೆ ಹೋಗಿ ಮತ್ತೆ ಒಣ ಮೇವಿಗೆ ಎನ್ ಮಾಡ್ತೀರಾ? ಏನು ಮಾಡಬೇಡಿ ದುಡ್ಡು ಕಟ್ಟು ತಗೊಳ್ಳಿ 😜
11. ಇನ್ನ ಹಸುಗಳನ್ನು ತಂದ ಮೇಲೆ ನಿಮ್ಮ ಹತ್ತಿರದ ಡೈರಿ ಅಲ್ಲಿ ಇನ್ಸೂರೆನ್ಸ್ ಮಾಡ್ಸಿ ಏನಾದ್ರೂ ಅಪ್ಪಿ ತಪ್ಪಿ ಹಸು ತೀರಿಹೋದರು ನಿಮಗೆ ನಿಮ್ಮ ಹಣ ವಾಪಾಸ್ ಬರುತ್ತೆ.
12. ಇನ್ನ ಲಾಭದ ವಿಷಯಕ್ಕೆ ಬಂದ್ರೆ .. ತುಂಬಾ ಲಾಭ ಇದೆ ಆದ್ರೆ ಡೆಡಿಕೇಶನ್ ಮುಖ್ಯ ಅಷ್ಟೇ, ಸುಮ್ನೆ calculate ಮಾಡೋಣ
ನೀವು ಒಂದು ಹೊತ್ತಿಗೆ 60 litre ಹಾಲು ಹಾಕ್ತೀರಾ ಅಂತ ಇಟ್ಕೊಳೋಣ, 1 litre ಹಾಲಿಗೆ ಇವಾಗಿನ ರೇಟ್ 30rs ಇದೆ ಅಂದ್ರೆ 60 *30 = 1800/- ಇದು ಒಂದು ಹೊತ್ತಿಗೆ ಅದೇ ದಿನಕ್ಕೆ ಆದ್ರೆ 3600/- , ಹೆಂಗೆ😁
ಒಂದು ತಿಂಗಳಿಗೆ ಲೆಕ್ಕ ಹಾಕೋಣ ಬನ್ನಿ 3600 * 30 = 108000/-
ಇದ್ರಲ್ಲಿ ಆಕಳು maintenance ಗೆ ಅಂತ 45000/- ತೆಗೆದರು ನಿಮಗೆ ಉಳಿದಿದ್ದು 63000/-
Yes, This is business.. ಆದ್ರೆ ಒಂದು ನಾವು ಮರೆತ್ವಿ ಕರ್ನಾಟಕ ಸರ್ಕಾರ ಪ್ರತೀ ಲೀಟರ್ ಗೆ 5 ರೂಪಾಯಿ ಪ್ರೋತ್ಸಾಹ ಧನ ಕೊಡುತ್ತೆ ಅಂದ್ರೆ ನಾವು ಒಂದು ತಿಂಗಳಿಗೆ 3600ಲೀಟರ್ ಹಾಲು ಹಾಕ್ತೀವಿ ಅಂದ್ರೆ 3600*5 = 18000/-
ಹಾಗಾದ್ರೆ ನಮಿಗೆ total profit ಎಷ್ಟು??? 63000+18000 = 81000/-
ಇದಲ್ದೆ ನಮಿಗೆ ಸಗಣಿ ಅಲ್ಲು ಲಾಭ ಇದೆ ಅದ್ನ ಲಾಭಕ್ಕೆ ಪರಿಗಣಿಸೋದು ಬೇಡ ಅಂತ..
ಇಷ್ಟು ಲಾಭದಾಯಕ ಬ್ಯುಸಿನೆಸ್ ಹೈನುಗಾರಿಕೆ😊
ಈ ಬ್ಲಾಗ್ ಓದಿದ ಎಲ್ಲರಿಗೂ ಧನ್ಯವಾದಗಳು.. ಇಂತಿ ನಿಮ್ಮ ಗೆಳೆಯ VK 😊
Comments
Post a Comment