ಶ್ರೀಗಂಧ ಕೃಷಿ ಮಾಡಬೇಕಾ.. ಹಾಗಾದ್ರೆ ಈ ಬ್ಲಾಗ್ ಪೂರ್ತಿ ಓದಿ
ಹಲೋ ಗೆಳೆಯರೇ ! ನಮಸ್ಕಾರ
ಈ ಬ್ಲಾಗ್ ಓದಲು ಬಂದಿರುವ ನಿಮಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು.
ಶ್ರೀಗಂಧ, ನಮಗೆ ಗೊತ್ತಿರುವ ಹಾಗೆ ತುಂಬಾ ಬೆಲೆ ಬಾಳುವ ಒಂದು ಮರ, ಇದನ್ನ ಬೆಳೆಯೋದು ಹೇಗೆ, ಅರಣ್ಯ ಇಲಾಖೆ ಇಂದ ಪರ್ಮಿಷನ್ ಬೇಕಾ.? ಅರಣ್ಯ ಇಲಾಖೆ ನಮಿಗೆ ಏನು ಕೊಡುತ್ತೆ.? ಗನ್ ಕೊಡುತ್ತಾ ನಮಿಗೆ ಕಾವಲಿಗೆ.? ಇವೆಲ್ಲ ಡೌಟ್ ನಿಮಗೆ ಇದ್ದೇ ಇದೆ ಅಲ್ವಾ, ಬನ್ನಿ ಮತ್ತೆ ತಿಲ್ಕೊಳೋಣ..
ಗಂಧದಲ್ಲಿ ಎರಡು ಜಾತಿ 1. Red sandal 2. White sandal ಅಂದ್ರೆ ರಕ್ತ ಚಂದನ ಮತ್ತು ಶ್ರೀಗಂಧ.
ಈ ಎರಡೂ ಜಾತಿಯ ಮರಕ್ಕೆ ತುಂಬಾ ಬೆಲೆ, ಆದ್ರೆ ಸ್ವಲ್ಪ ವರ್ಷಗಳ ಕಾಲ ನಾವು ಕಾಯಬೇಕಾಗುತ್ತದೆ.
ದುಡ್ಡು ಬೇಕು ಅಲ್ವಾ ಬೇಕು ಅಂದ್ರೆ ಕಾಯಲೇ ಬೇಕು ಅಂಡ್ ರಿಸ್ಕ್ ತಗೋಬೇಕು, ಜೀವನದಲ್ಲಿ ರಿಸ್ಕ್ ಇಲ್ಲ ಅಂದ್ರೆ ಎಂತಾ ಅಲ್ವಾ? ಸರಿ ಏನು ಬೇಕು ಶ್ರೀಗಂಧ ಬೆಳೆಯೋಕೆ ನೋಡೋಣ ಬನ್ನಿ
- ಮಣ್ಣು : ಶ್ರೀಗಂಧ ಎಲ್ಲಾ ರೀತಿಯ ಮಣ್ಣಿನಲ್ಲೂ ಬೆಳೆಯುತ್ತೆ ಇದಕ್ಕೆ ಇದೆ ಮಣ್ಣು ಬೇಕು ಅಂತ ಏನಿಲ್ಲ ಆದ್ರೆ ಹೆಚ್ಚು ಸೂಕ್ತವಾದ ಮಣ್ಣು ಮರಳು ಮಿಶ್ರಿತ ಕೆಂಪು ಮಣ್ಣು.
- ಶ್ರೀಗಂಧ ಸಸಿಗಳು ಎಲ್ಲಿ ಸಿಗುತ್ತೆ? Usually ಶ್ರೀಗಂಧ ಮರಗಳು ಅರಣ್ಯ ಇಲಾಖೆ ಯಲ್ಲಿ ಸಿಗುತ್ತೆ ಅಥವಾ ಖಾಸಗಿ ನರ್ಸರಿ ಅಲ್ಲಿ ಸಿಗುತ್ತವೆ.
- Okay, ಒಂದು ಸಸಿಗೆ ಎಷ್ಟು ದುಡ್ಡು? ಅರಣ್ಯ ಇಲಾಖೆಯಲ್ಲಿ ಪ್ಯಾಕೇಟ್ ಮೇಲೆ ಅವಲಂಬಿತ ಅಂದ್ರೆ ಚಿಕ್ಕ ಪ್ಯಾಕೇಟ್ ಅಲ್ಲಿನ ಸಸಿ ತಂದ್ರೆ 8rs ಹಾಗೂ ದೊಡ್ಡ ಪ್ಯಾಕೇಟ್ ನ ಸಸಿ ತಂದ್ರೆ 20rs to 25rs ಮತ್ತು ಖಾಸಗಿ ನರ್ಸರಿ ಅಲ್ಲಿ depends 40rs or 50rs per ಸಸಿಗೆ.
- ಏನೇನು ಕೊಡ್ತಾರೆ ಅರಣ್ಯ ಇಲಾಖೆ ಅಲ್ಲಿ ನಾವು ಸಸಿ ತಗೊಂಡ್ರೆ? ನಾವು ಏನಾದ್ರೂ ಸಸಿಗಳನ್ನು ಅರಣ್ಯ ಇಲಾಖೆಯಲ್ಲಿ ತಗೊಂಡ್ರೆ ಅವ್ರು ನಮಿಗೆ ಸಹಾಯ ಧನ ಕೊಡ್ತಾರೆ ಅಂದ್ರೆ 3 ವರ್ಷಕ್ಕೆ 75rs ಕೊಡ್ತಾರೆ ಅಂದ್ರೆ 400 ಸಸಿ ಹಾಕಿದ್ರೆ 400*75 ಎಷ್ಟಾಗುತ್ತೋ ಅಷ್ಟು, ಆದ್ರೆ ಸಸಿನ ಚೆನ್ನಾಗಿ ನೊಡ್ಕೊಬೇಕು ಅವ್ರು ಕೌನ್ಸಿಲಿಂಗ್ ಗೆ ಬಂದಾಗ ಎಲ್ಲಾನೂ ಚೆಕ್ ಮಾಡ್ತಾರೆ.
- ಗನ್ ಕೊಡ್ತಾರ? ಇಲ್ಲ ಗನ್ ಎಲ್ಲಾ ಏನು ಕೊಡೋಲ್ಲ ನೀವು ಶ್ರೀಗಂಧ ಬೆಳೆದರೆ ಅದರ ಸೆಕ್ಯೂರಿಟಿ ನೀವೇ ನೊಡ್ಕೊಬೇಕಾಗುತ್ತೆ.
- ಸಸಿ mortality ರೇಟ್ ಎಷ್ಟ್? ನೀವು ಮೊದಲು ಸಸಿ ಹಾಕಿದಾಗ 75% ಸಸಿಗಳು ಮಾತ್ರ ಬದುಕುತ್ತವೆ ಇನ್ನೂ ಉಳಿದ 25% ಸಸಿಗಳು ಸತ್ತುಹೋಗುತ್ತವೆ.
- ಎಷ್ಟು ದೂರಕ್ಕೆ ಒಂದು ಸಸಿ ನೆಡಬೇಕು? ಇದು ರೈತರ ಮೇಲೆ depend ಆಗಿರುತ್ತೆ ಬೆಸ್ಟ್ ಅಂದ್ರೆ 8*7 or 8*9.
- ಶ್ರೀಗಂಧ ಒಂದು ಪರಾವಲಂಬಿ ಸಸಿ ಅಂದ್ರೆ ಈ ಮರಕ್ಕೆ ತನ್ನದೇ ಆದ ಆಹಾರ ತಯಾರಿಸಿಕೊಳ್ಳೋಕೆ ಆಗೋದಿಲ್ಲ ಆದ್ರೆ ಇದು ಬೇರೆ ಮರದಿಂದ ಆಹಾರ ನ ಎರವಲು ಪಡೆಯುತ್ತೆ ಅಂತ ಅನ್ನಬಹುದು ಅದಿಕ್ಕೆ ಸಸಿ ನಾಟಿ ಮಾಡುವಾಗ host ಸಸಿಯನ್ನು ಕೂಡ ಹಾಕಿ.
- ಬೆಸ್ಟ್ ಹೋಸ್ಟ್ ಯಾವ್ದು ಅಂದ್ರೆ ಅಗಸೆ ಮರ ಇದನ್ನ ಒಂದು ಸಾರಿ ಹಾಕಿದ್ರೆ 3 ವರ್ಷ ನಿಮ್ಮ ಶ್ರೀಗಂಧದ ಮರಕ್ಕೆ ಆಹಾರ ಕೊಡುತ್ತೆ.
ಆದ್ರೆ ಒಂದು ಮಾತ್ರ ನಾವು ಎಚ್ಚರಿಕೆ ಇಂದ ಇರ್ಬೇಕು ಯಾಕಂದ್ರೆ ಕಳ್ಳರ ಕಾಟ ಯಾವ ಹೊತ್ತಲ್ಲಿ ಯಾರು ಏನು ಮಾಡ್ತಾರೋ ಏನೋ.. ಈ ಫೀಲ್ಡ್ ಅಲ್ಲಿ ಮಾತ್ರ ಜೀವಕ್ಕೆ ಗ್ಯಾರಂಟಿ ಇಲ್ಲ.
ಏನೇ ಆಗ್ಲಿ ಶ್ರೀಗಂಧದ ಕಾವಲಿಗೆ ಸೆಕ್ಯೂರಿಟಿ ಕ್ಯಾಮೆರಾ ಹಾಕಿಕೊಳ್ಳಿ ಮತ್ತೆ ನಿಮ್ಮ ಹೊಲದ ಸುತ್ತ ತಂತಿ ಬೇಲಿ ಹಾಕಿ, ಅರಣ್ಯ ಇಲಾಖೆ ಇಂದ ಸಬ್ಸಿಡಿ ಸಿಗುತ್ತೆ ಸೋಲಾರ್ ಫೆನ್ಸಿಂಗ್ ಗೆ.
ಹಾಗೆ, ಒಂದೆರಡು ನಾಯಿ ಇದ್ರೆ ಒಳ್ಳೆದು ಮನುಷ್ಯ ಯಾವುದಕ್ಕೆ ಎದೃತಾನೋ ಇಲ್ಲೋ ಆದ್ರೆ ನಾಯಿಗೆ ಮಾತ್ರ ಪಕ್ಕ ಎದೃತಾನೆ😁
ಏನೇ ಹೇಳಿ ಶ್ರೀಗಂಧ ಕೃಷಿ ಒಂದು ತಲೆನೋವು ಸ್ವಲ್ಪ ವರ್ಷ ಆಮೇಲೆ ಜಿಂಗಾಲಾಲ😜 ಯಾಕಂದ್ರೆ ಕೋಟಿ ದುಡ್ಡು ಸಿಗುತ್ತಲ, ಈ ಸಂದರ್ಭದಲ್ಲಿ ನಾನು ಒಂದು ಹೇಳೋಕೆ ಇಷ್ಟ ಪಡ್ತೀನಿ ಅದೇನು ಅಂದ್ರೆ ಶ್ರೀಗಂಧ ಬೇಳಿದ್ರೆ ಜೀವಕ್ಕೆ ಗ್ಯಾರಂಟಿ ಇಲ್ಲ ಅಷ್ಟೇ😜😜
ಸುಮ್ನೆ ತಮಾಷೆ ಮಾಡಿದ್ದು ಅಷ್ಟೇ ಜೀವಕ್ಕೆ ಏನು ಹಾನಿ ಇಲ್ಲ ಆದ್ರೆ ಸೆಕ್ಯೂರಿಟಿ ಬಗ್ಗೆ concentrate ಮಾಡಿ ಅಷ್ಟೇ.
ಏನೋ ಈ ಬ್ಲಾಗ್ ನೋಡಿ ಯಾರಿಗಾದ್ರೂ ಶ್ರೀಗಂಧ ಬೆಳಿಬೇಕು ಅಂತ ನಿಮಗೆ ಮನಸು ಬಂದ್ರೆ ಅಷ್ಟೇ ಸಾಕು. ಸಾಕಷ್ಟು ರಿಸರ್ಚ್ ಮಾಡಿ ಮುಂಚೆ ಆಮೇಲೆ ಸಸಿ ನಾಟಿ ಮಾಡಿ.
ಮತ್ತೆ ಇನ್ನೊಂದು ಶ್ರೀಗಂಧ ಕೃಷಿಗೆ ನೀರು ಹೆಚ್ಚು ಬೇಡ😊😊
ಇಷ್ಟೇ ಗೆಳೆಯರೇ.. ಎಲ್ಲರಿಗೂ ಧನ್ಯವಾದಗಳು ನನ್ನ ಬ್ಲಾಗ್ ಓಡಿದಕ್ಕೆ. ನಿಮ್ಮ ಗೆಳೆಯ VK😊😊
Comments
Post a Comment