ಒಂದು ಎಕರೆ ಹೊಲದಲ್ಲಿ ಏನೇನೆಲ್ಲಾ ಬೆಳೆಯಬಹುದು..??

 ನಮಸ್ಕಾರ ಗೆಳೆಯರೇ, ನಮ್ಮ ಬ್ಲಾಗ್ ಗೆ ಸ್ವಾಗತ, ಸುಸ್ವಾಗತ.

ನಮ್ಮ ಇವತ್ತಿನ ಟಾಪಿಕ್ ಏನೇನ್ ಎಲ್ಲಾ ಬೆಳೆಯಬಹುದು ಒಂದು ಎಕರೆ ಹೊಲದಲ್ಲಿ..?

ಇತ್ತೀಚಿನ ದಿನದಲ್ಲಿ ತುಂಬಾ ಜನ ಸಮಗ್ರ ಕೃಷಿಗೆ ಹೆಚ್ಚು ಒಲವು ತೋರುತ್ತಿರುವುದು ಒಂದು ಖುಷಿಯ ವಿಚಾರ, ಹಾಗೆ ಸಮಗ್ರ ಕೃಷಿ ಅಂದ್ರೆ ಏನೇನೋ ಬೆಳೆಯೋದು ಅಲ್ಲ ಪಕ್ಕ ಪ್ಲಾನಿಂಗ್ ಮಾಡಬೇಕು.

ನನ್ನ ನೀವು ಕೆಳೋದಾಡ್ರೆ ಒಂದು ಎಕರೆ ಹೊಲದಲ್ಲಿ 5 ರಿಂದ 6 ರೀತಿಯ ವಿವಿಧ ಬೆಳೆಗಳನ್ನು ಬೆಳೆಯಬಹುದು... ಅವು ಯಾವುವು ಅಂದ್ರೆ.

  1. ತೆಂಗು (coconut 🥥)
  2. ಪೇರಲೆ (Guaua)
  3. ಶ್ರೀಗಂಧ
  4. ನುಗ್ಗೆ (ತಾತ್ಕಾಲಿಕ ವಾಗಿ)
  5. ಪಪ್ಪಾಯ
  6. ಇನ್ನ ನೀವು ಡೈರಿ ಫಾರ್ಮ್ ಮಾಡ್ತಿದ್ರೆ ಮೇವು ಕೂಡ ಬೆಳಿಬೋದು 🔥
ಇಷ್ಟೆಲ್ಲ ಬೆಳೆಯಬಹುದಾ..? ಅಂತ ನೀವು ಅಂದುಕೊಳ್ತ ಇದ್ರೆ ಹೌದು ಇದು ಸಾದ್ಯ, ಮನಸಿದ್ದರೆ ಮಾರ್ಗ ಅಂತ ದೊಡ್ಡೋರು ಹೇಳಿಲ್ವ, ಏನೇ ಮಾಡಿದ್ರೂ ಶ್ರದ್ಧೆ ಭಕ್ತಯಿಂದ ನಾವು ಕೆಲಸ ಮಾಡಿದ್ರೆ ಆ ಭೂಮಿತಾಯಿ ಯಾರನ್ನು ಕೈ ಬಿಡೋಲ್ಲ ಅನ್ನೋದು ನನ್ನ ನಂಬಿಕೆ.. ನಿಮ್ದು..??

ಹೇಗೆ ಪ್ಲಾನ್ ಮಾಡಬೇಕು ಅಂತ ಯೋಚ್ನೆ ಮಾಡ್ತಾ ಇದ್ದೀರಾ.. ಇವಾಗ ಹೇಳ್ತೀನಿ ನೋಡಿ

ಒಂದು ಎಕರೆ ಹೊಲ ಅಂದ್ರೆ 40 ಗುಂಟೆ. ಹೀಗೆ ನಿಮ್ಮ ಜಮೀನು ಯಾವ ಆಕಾರದಲ್ಲಿ ಇದೆ ಅಂತ ಮೊದಲು ನೋಡ್ಕೊಳ್ಳಿ

1. 30 feet*30feet ಅಲ್ಲಿ ನೀವು ತೆಂಗು ಹಾಕಬಹುದು ಅಂದಾಜು 50 ರಿಂದ 60 ಗಿಡಗಳು ನಾವು ನಾಟಿ ಮಾಡಬಹುದು.

2. 7 feet* 7feet ಒಂದು ಸಾಲು ಮಾಡಿದ್ರೂ ನೀವು ಒಂದು ತೆಂಗಿನ ಸಾಲಿನಿಂದ ಇನ್ನೊಂದು ತೆಂಗಿನ ಸಾಲಿನ ಒಳಗಡೆ ಮೂರು ಸಾಲು ಕೂರಿಸಬಹುದು, ಅಂದ್ರೆ ಮೊದಲು ಪೇರಲೆ ಗಿಡ ನೆಟ್ಟರೆ ಆಮೇಲೆ ಶ್ರೀಗಂಧ ನೆಡಿ.. ಹೀಗೆ ಮಾಡಿದರೆ ನೀವು ಒಂದು ಎಕರೆ ಅಲ್ಲಿ 400 ಶ್ರೀಗಂಧ ಹಾಗೂ 400 ಪೇರಲೆ ಹಾಕಬಹುದು.

ಅಂದ್ರೆ... ಹೀಗೆ ನೋಡಿ
  • ಪೇರಲೆ ಗಿಡ
  • ಶ್ರೀಗಂಧ
  • ಪೇರಲೆ
  • ಶ್ರೀಗಂಧ
  • ಪೇರಲೆ
  • ಶ್ರೀಗಂಧ
ಇವಾಗ ಅರ್ಥ ಆಯ್ತು ಅನ್ಸುತ್ತೆ ನಿಮಗೆ..

ಇನ್ನ ಜಾಗ ಉಳಿತ ಒಂದು ಎಕರೆ ಅಲ್ಲಿ ಅಂತ ಯೋಚನೆ ಮಾಡ್ತಾ ಇದ್ದೀರಾ..
ಹೌದು ಉಳಿದಿದೆ.. ಹೇಗೆ ಅಂತೀರಾ..?
7 feet to 7feet ಮದ್ಯೆ 3.5 feet ಗೆ ಒಂದು ಸಾಲು ಮಾಡಿ ಅಲ್ಲಿ ನೀವು ನುಗ್ಗೆ ಹಾಕಬಹುದು ಮತ್ತು ಪೇರಲೆ - ಶ್ರೀಗಂಧ ಗಿಡದ ಮದ್ಯೆ 3.5feet ಗೆ ಒಂದು ಪಪ್ಪಾಯ ಗಿಡ ನೆಟ್ಟುಕೊಳ್ಳಬಹುದು.

ಹೀಗೆ ಹೊಲದ ಸುತ್ತಲೂ ಬೇಲಿಯ ರೂಪದಲ್ಲಿ ನೀವು ನಿಮ್ಮ ದನಗಳಿಗೆ ಮೇವು ಬೆಳಿಯಬಹುದು.. ಹೆಂಗೆ ನಾವು 😜😜

ಕೊನೆಯದಾಗಿ ನಾ ಹೇಳೋದು ಒಂದೇ ಪ್ಲಾನಿಂಗ್ ಮಾಡಿ ನಿಮಗೆ ಅನುಕೂಲವಾಗುವ ಬೆಳೆ ಆಯ್ಕೆ ಮಾಡಿ ನೀವು ಉದ್ದಾರ ಆಗಬಹುದು.. ರೈತರು ಕಿಂಗು.. 👑

ಧನ್ಯವಾದಗಳು ಎಲ್ಲರಿಗೂ... ನನ್ನ ಬ್ಲಾಗ್ ಓದಿದ ನಿಮಗೆ ಎಲ್ಲರಿಗೂ ನನ್ನ ತುಂಬುಹೃದಯದ ಧನ್ಯವಾದಗಳು... ಇಂತಿ ನಿಮ್ಮ ಗೆಳೆಯ VK😊😊

Comments