ನೀವು ನಿಮ್ಮ ಹೊಲಕ್ಕೆ ಹನಿ ನೀರಾವರಿ ಮಾಡಬೇಕಾ..? ಹಾಗಿದ್ರೆ ಈ ಬ್ಲಾಗ್ ಪೂರ್ತಿ ಓದಿ

 ಹಲೋ ಗೆಳೆಯರೇ, ನಮಸ್ತೆ

ನಮ್ಮ ಈ ಬ್ಲಾಗ್ ಗೆ ಸ್ವಾಗತ, ಸುಸ್ವಾಗತ.. ಬನ್ನಿ ಬನ್ನಿ ಇವತ್ತು ಸರಿಯಾಗೇ ತಿಳಿದುಕೊಳ್ಳೋಣ.

ಇವತ್ತಿನ ಕಾಲದ ಮಳೆ ಗೆ ನಮ್ಮ ಎಲ್ಲಾ ರೈತರಿಗೂ ಸಾಕ್ ಸಾಕಾಗಿದೆ ಎನ್ ಮಾಡೋಣ ಹೇಳಿ ಎಲ್ಲಾ ಪ್ರಕೃತಿ ದೇವಿಯ ಮಹಿಮೆ, ಅವ್ಳು ಕೊಟ್ಟಾಗ ನಾವು ಇಸ್ಕೊಬೇಕು ಅಷ್ಟೇ.

100 ಕ್ಕೆ 40% ಜನರು ಇವಾಗ ಬೋರ್ವೆಲ್ ನೀರಾವರಿಯಲ್ಲಿ ತೊಡಗಿದ್ದಾರೆ, ಅವರಿಗೆಲ್ಲ ಬೇಕಾಗಿರೋದು ತುಂಬಾ ಮೇಲೆ ಯಾಕಂದ್ರೆ ಬೇಸಿಗೆಯಲ್ಲಿ ಅವ್ರ ಬೆಳೆಗೆ ನೀರ್ ಬೇಕಲ್ವಾ.. ಈ ವರ್ಷ ಅಂದ್ರೆ 2024ರಲ್ಲಿ ಬಂದಿರೋ ಬರಗಾಲಕ್ಕೆ ಜನ ರೋಸೊತ್ತು ಹೋಗಿದಾರೆ, ಹಾನಿ ನೀರಾವರಿಗೆ ಒಲವು ತೋರಿದ್ದಾರೆ.


ಏನೇ ಆಗ್ಲಿ ರೈತರು ನೀರನ್ನು ಮಿತವಾಗಿ ಬಳಸಿ ತಮ್ಮ ಬೆಲೆಯನ್ನು ಉಳಿಸಿಕೊಳ್ಳೋದು ಒಳ್ಳೆದು, ಬನ್ನಿ 1 ಎಕರೆ ಹನಿ ನೀರಾವರಿಗೆ ಎಷ್ಟು ಖರ್ಚು ಆಗುತ್ತೆ ನೋಡೋಣ.

ರೈತರು ಗಮನಿಸಬೇಕಾದ ಅಂಶಗಳು, ಹನಿ ನೀರಾವರಿಗೆ ಹೋಗುವ ಮುನ್ನ

  • ಮೊದಲು ತಮ್ಮ ಹೊಲದ ಬೋರ್ವೆಲ್ ನಲ್ಲಿ ಎಷ್ಟು ನೀರಿದೆ ತಿಳ್ಕೊಳ್ಳಿ
  • ನಿಮ್ಮ ಹೊಲದ ಅಳತೆ ಇರಲಿ, ಮೀಟರ್ ಅಲ್ಲಿ ಒಂದು ಅಂದಾಜು ಮಾಡ್ಕೊಳ್ಳಿ ಯಾಕಂದ್ರೆ ಡ್ರಿಪ್ wire ನ ನಿಮ್ಮ ಹೊಲದ ಅಳತೆ ಎಷ್ಟಿದೆಯೋ ಅಷ್ಟೇ ತನ್ನಿ, ಒಂದು 200m or 300m ಜಾಸ್ತಿ ತಂದ್ರೆ ಸಾಕು.
  • ಒಂದು bundle ಡ್ರಿಪ್ wire ಸುಮಾರು 200m ಉದ್ದ ಬರುತ್ತೆ.
  • ನೀವು ಎಷ್ಟು ಕಚ್ಚು ಮಾಡ್ಕೋಬೇಕು ಫಸ್ಟ್ decide ಮಾಡಿ
  • ಎಷ್ಟು ದಪ್ಪ wire ತರ್ತಿರ decide ಮಾಡ್ಕೊಳಿ ಅಂದ್ರೆ 8mm wire, 10mm, 12mm,18mm ದಪ್ಪ.
  • ಪೈಪ್ ಯಾವ್ದು ಅಂತ ಡಿಸೈಡ್ ಮಾಡ್ಕೊಳಿ ಅಂದ್ರೆ Pvc or Ashirvad etc, ಎಷ್ಟು ದಪ್ಪ ಅಂತ ಅಂದ್ರೆ ಒಂದು ಕಾಲು ಇಂಚು/ಒಂದೂವರೆ ಇಂಚು/2ಇಂಚು ದಪ್ಪ, ಇದನ್ನ ನಿಮ್ಮ ನೀರಿನ ಮೇಲೆ decide ಮಾಡ್ಕೊಳೋದು ನಿಮ್ಮದೇ ಜವಾಬ್ದಾರಿ.
  • ಸಾದ್ಯ ಆದ್ರೆ ನಿಮ್ಮ ಹೊಲಕ್ಕೆ ನೀವೇ ಡ್ರಿಪ್ಪಿಂಗ್ ಮಾಡಿ ಕೂಲಿ ಹಂಗೆ ಮಾಡ್ಸಿದ್ರೆ ಸುಮ್ನೆ 5000 ಖರ್ಚು ಆಗುತ್ತೆ😜
  • ಪೈಪ್ ಕೆಳಗೆ ಅಂದ್ರೆ ಭೂಮಿ ಒಳಗೆ ಹುಗಿತೀರೋ or ಮೇಲೆ ಬಿಡ್ತೀರಾ ನಿಮ್ಮ ಆಯ್ಕೆ, ಭೂಮಿ ಮೇಲೆ ಪೈಪ್ ಬಿಟ್ರೆ ಬಿಸಿಲಿಗೆ ಕಾದು ಪೈಪ್ ಹಾಳಾಗುತ್ತವೆ ಅಷ್ಟೇ ಅದ್ನ ಬಿಟ್ರೆ ಏನು ಆಗೋಲ್ಲ😅😅
ಡ್ರಿಪ್ irrigation ಅಂದ್ರೆ ಹನಿ ನೀರಾವರಿಗೆ ಎಷ್ಟು ಖರ್ಚು ತಗಲುತ್ತೆ ಅಂತ ನಿಮಗೆ ಡೌಟ್ ಇದೇನಾ..? ಹಾಗಿದ್ರೆ ಮುಂದೆ ಓದಿ...

ಒಂದು ಎಕರೆ ಹೊಲಕ್ಕೆ ನೀವು ಹೊಸದಾಗಿ ಡ್ರಿಪ್ irrigation ಮಾಡ್ತೀರಾ ಅಂದ್ರೆ ಅದಕ್ಕೆ ತಗಲುವ ಖರ್ಚು ಈ ರೀತಿ ಇರುತ್ತೆ.

  1. ಪೈಪ್ ಅಂಡ್ ಡ್ರಿಪ್ ವೈರ್ ಗೆ ಅಂದಾಜು 30000 to 40000 ಆಗ್ಬೋದು.
  2. ಗಮ್, ಟೂಲ್ಸ್, ಎಂಡ್ ಕ್ಯಾಪ್, ತೂತು ಮಾಡುವ tool, contol ವಾಲ್ etc ಇವಕ್ಕೆ ಅಂದಾಜು 5000 ದಿಂದ 10000 ಆಗಬಹುದು.
  3. ಇನ್ನ ನೀವು ಪೈಪ್ ಭೂಮಿ ಕೆಳಗೆ ಹಾಕುತ್ತೀರಾ ಅಂದ್ರೆ ಜೆಸಿಬಿ or ಕೂಲಿ ಕಾರ್ಮಿಕರಿಗೆ ಅಂದಾಜು 5000 ಆಗಬಹುದು.
  4. ಡ್ರಿಪ್ ಲೈನ್ ಮಾಡುವವರಿಗೆ 5000 ಬೇಕು.. ಅದ್ಕೆ ನಿಮ್ಮ ಹೊಲಕ್ಕೆ ನೀವೇ ಡ್ರಿಪ್ ಮಾಡ್ಕೊಳಿ, ಡ್ರಿಪ್ ಮಾಡ್ಕೊಳೋದು ತುಂಬಾ easy.
ಏನೇ ಆಗ್ಲಿ ಒಂದು ಎಕರೆಗೆ ಡ್ರಿಪ್ irrigation ಮಾಡಬೇಕು ಅಂದ್ರೆ atleast ನಿಮ್ಮ ಹತ್ರ 50000 ಇರಬೇಕು.

ನಿಮಗೆ ಸಬ್ಸಿಡಿ ಬೇಕು ಅಂದ್ರೆ ನಿಮ್ಮ ಹತ್ತಿರದಲ್ಲಿ ಇರುವ ಕೃಷಿ ಆಫೀಸ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದರೆ ನಿಮಗೆ ಹನಿ ನೀರಾವರಿಗೆ ಬೇಕಾಗುವ ಎಲ್ಲಾ ಸಾಮಗ್ರಿಗಳು ಸಿಗ್ತದೆ ಆದ್ರೆ ನೀವು ಕಾಯಬೇಕು ಗೊತ್ತಲ್ಲ ಹೆಂಗೆ ಅಂತ.. ಕ್ವಾಲಿಟಿ ಬಗ್ಗೆ ನನಿಗೆ ಗೊತ್ತಿಲ್ಲ ನೀವೇ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ತಗೊಳ್ಳಿ..

ಇವತ್ತಿನ ವಿಷಯ ಇಷ್ಟೇ ನೋಡ್ರಿ... ಏನೋ ಈ ಬ್ಲಾಗ್ ಇಂದ ನಿಮಗೆ ಏನಾದ್ರೂ ಹೆಲ್ಪ್ ಆದ್ರೆ ಅಷ್ಟೇ ಸಾಕು ನನಿಗೆ..

ಈ ಬ್ಲಾಗ್ ಓದಿದ ಎಲ್ಲರಿಗೂ ಧನ್ಯವಾದಗಳು , ಇಂತಿ ನಿಮ್ಮ ಗೆಳೆಯ VK😊😊







Comments

Popular posts from this blog

ಹೈನುಗಾರಿಕೆ ನಿಜವಾಗಲೂ ಲಾಭದಾಯಕ ಉದ್ಯಮವೇ..?

ಹೊಸದಾಗಿ ನಿಮ್ಮ ಮನೆಗೆ ಕರೆಂಟ್ ತಗೊಬೇಕಾ? ಎನ್ ಪಾಲಿಸಿ ಇದೆ ಹಂಗಾದ್ರೆ ..?