ಹೊಸದಾಗಿ ನಿಮ್ಮ ಮನೆಗೆ ಕರೆಂಟ್ ತಗೊಬೇಕಾ? ಎನ್ ಪಾಲಿಸಿ ಇದೆ ಹಂಗಾದ್ರೆ ..?

 ಹಲೋ ಗೆಳೆಯರೇ! ನಮಸ್ತೆ! 

ನನ್ನ ಬ್ಲಾಗ್ ಗೆ ಸ್ವಾಗತ, ಸುಸ್ವಾಗತ.

ಇವತ್ತು ನಾವು ಹೇಳೋಕೆ ಹೊರಟಿರುವ ವಿಷಯ ಕರೆಂಟ್ ಬಗ್ಗೆ.

ಈಗ ಊಹಿಸಿ ನೀವು ನಿಮ್ಮ ಕನಸಿನ ಮನೆ ಕಟ್ಟುಸಿರ್ತಿರ ಬೇರೆ ಜಾಗದಲ್ಲಿ ಅಂದ್ರೆ ನೀವು ಇವಾಗ ಇರುವ ಮನೆ ಕೆಡವಿ ಅದೇ ಜಾಗದಲ್ಲಿ ಬಿಟ್ಟು ಬೇರೆ ನಿಮ್ಮದೇ ಆದೆ ಜಾಗದಲ್ಲಿ ಮನೆ ಕಟ್ಟಿಸಿದಿರ ಅಂದುಕೊಳ್ಳಿ, ಹಾಗಾದ್ರೆ ಅದು ನಮ್ಮ ಮನೆ ಅಲ್ವಾ ಅಲ್ಲಿಗೆ ಕರೆಂಟ್ ಅಂದ್ರೆ ಹಳೆ ಮೀಟರ್ ಹಾಕೋಲ್ವ..?


ಕರ್ನಾಟಕ ವಿದ್ಯುತ್ ನಿಗಮದಿಂದ ಕೆಲವು ಮಾನದಂಡಗಳು ಇದಾವೆ, ಅವುಗಳೆಂದರೆ

  1. ನೀವು ನಿಮ್ಮ ಹಳೆ ಮನೆ ಕೆಡವಿ ಆದೆ ಜಾಗದಲ್ಲಿ ಹೊಸ ಮನೆ ಕಟ್ಟಿದ್ರೆ ನಿಮ್ಮದು ಹಳೆ ಮೀಟರ್ ಇದ್ರೆ ಅದನ್ನೇ KEB ಅಧಿಕಾರಿಗಳು ಫಿಕ್ಸ್ ಮಾಡ್ತಾರೆ ಆದ್ರೆ..
  2. ನೀವು ನಿಮ್ಮ ಹಳೆ ಜಾಗ ಬಿಟ್ಟು ಬೇರೆ ಜಾಗದಲ್ಲಿ ಹೊಸ ಮನೆ ಕಟ್ಟಿದರೆ ಈ ಕೆಳಗಿನ ಮಾನದಂಡಗಳು ಅಪ್ಲೈ ಆಗುತ್ತವೆ
  •  ಮೊದಲಿನದು, ನೀವು ಕಟ್ಟಿರುವ ಹೊಸ ಮನೆ ಗ್ರಾಮ ಠಾಣೆಗೆ ಸೇರಿದ್ರೆ ನೀವು ಕೇವಲ 3500 ರೂಪಾಯಿಯನ್ನು ಕಟ್ಟಿ ಹೊಸ ಮೀಟರ್ ತಗೊಬಹುದು, ಈ ದುಡ್ಡು 2024 ಅಂದ್ರೆ ಪ್ರತುತವಾಗಿ ನಡೆಯುತ್ತದೆ.
  • ಎರಡನೇಯದು, ನೀವು ನಿಮ್ಮ ಮನೆಯನ್ನು ನಿಮ್ಮ ಹೊಲ ಅಥವಾ ತೋಟದಲ್ಲಿ ಕಟ್ಟಿಸಿದ್ರೆ 100% ಅದು ಗ್ರಾಮ ಪಂಚಾಯಿತಿಗೆ ಸೇರಿರುವುದಿಲ್ಲ,  ಈ ಸಂದರ್ಭದಲ್ಲಿ ನೀವು KEB ಗೆ ಡೆವಲಪ್ಮೆಂಟ್ ಚಾರ್ಜರ್ಸ್ ಅಂತ 7500 ರೂ ಹಾಗೂ ಮೀಟರ್ ಗೆ 3500 ರೂಪಾಯಿ ಕಟ್ಟಬೇಕಾಗುತ್ತದೆ.
  • Incase ನಿಮ್ಮ ಹೊಲದ ಹತ್ತಿರ ಯಾವುದೇ ಲೈಟ್ ಕಂಬಗಳು ಇಲ್ಲ ಆದ್ರೆ ನೀವು ಲೈಟ್ ಕಂಬಗಳನ್ನು ಸ್ವಂತವಾಗಿ ಹಾಕಿಸಬೇಕಾಗುತ್ತದೆ ಇದರ ಅಮೌಂಟ್ ಸ್ವಲ್ಪ ವೇರಿ ಆಗುತ್ತೆ ನೀವು ನಿಮ್ಮ ಹತ್ತಿರದ ವಿದ್ಯುತ್ ಕೇಂದ್ರಕ್ಕೆ ಬೇಟಿ ನೀಡಿ ಅಥವಾ ನಿಮ್ಮ ಊರಿನ ಲೈನ್ ಮ್ಯಾನ್ ಕೇಳಿದ್ರೆ ಅವರೇ ನಿಮಗೆ ಸಹಾಯ ಮಾಡುತ್ತಾರೆ.
ಇಷ್ಟೇ ಇವತ್ತಿನ ವಿಷಯ, ಮುಂದಿನ ಬ್ಲಾಗಿನಲ್ಲಿ ಇನ್ನೊಂದು ವಿಷಯ ಜೊತೆಗೆ ಬರ್ತೀನಿ...

ನನ್ನೀ ಬ್ಲಾಗ್ ಓದಿದ್ದಕ್ಕೆ ಧನ್ಯವಾದಗಳು.. ನಿಮ್ಮ ಪ್ರೀತಿಯ VK 😊

ಏನೇ ಆಗ್ಲಿ ಯೋಚಿಸಿ ಮುಂದುವರೆಯಿರಿ ಸುಮ್ನೆ ದುಡ್ಡು ಖರ್ಚು ಮಾಡಬಾರದು.. ಮಾಡಬೇಡಿ..♥️

Comments

Popular posts from this blog

ನೀವು ನಿಮ್ಮ ಹೊಲಕ್ಕೆ ಹನಿ ನೀರಾವರಿ ಮಾಡಬೇಕಾ..? ಹಾಗಿದ್ರೆ ಈ ಬ್ಲಾಗ್ ಪೂರ್ತಿ ಓದಿ

ಹೈನುಗಾರಿಕೆ ನಿಜವಾಗಲೂ ಲಾಭದಾಯಕ ಉದ್ಯಮವೇ..?