ಪ್ರಸ್ತುತ ಕರ್ನಾಟಕದಲ್ಲಿ ಏಕೆ ಅಡಿಕೆ ತೋಟದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ..?

 ಹಲೋ ಗೆಳೆಯರೇ, ನಮಸ್ಕಾರ

ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ , ಸುಸ್ವಾಗತ

ನಾನು ಇವತ್ತಿನ ನನ್ನ ಬ್ಲಾಗ್ ಗೆ ಆಯ್ಕೆ ಮಾಡಿಕೊಂಡಿರುವ ವಿಷಯ ಅಡಿಕೆ. ಯಾಕಂದ್ರೆ ಇತ್ತೀಚಿನ ದಿನದಲ್ಲಿ ಎಲ್ಲಾ ರೈತರು ತೋಟ ಮಾಡಲು ಹೊರಟಿದ್ದಾರೆ, ಕಾರಣ ಏನು? ಯಾಕೆ ಅಷ್ಟು ಒಲವು ಅಡಿಕೆ ಮೇಲೆ? ಬರ ಬಂದ್ರೆ ಹೆಂಗಪ? ರೇಟ್ ಕಮ್ಮಿ ಆದ್ರೆ ಎನ್ ಮಾಡೋದು? ಇವೆಲ್ಲವಕ್ಕೂ ನನಗೆ ಗೊತ್ತಿರುವ ಮಟ್ಟಿಗೆ ಪ್ರಾಮಾಣಿಕವಾಗಿ ಉತ್ತರ ನೀಡುತ್ತೇನೆ, ಬನ್ನಿ ಹಾಗಾದ್ರೆ ತಿಲ್ಕೊಳೋನ.


ಅಡಿಕೆ : ಕೆಲವು ವರ್ಷಗಳ ಹಿಂದೆ ಅಡಿಕೆ ತೋಟ ಇದ್ರೆ ಅವ್ರಿಗೆ ಒಂದು ಗತ್ತು ಇತ್ತು, ನೀ ಎನ್ ಬಿಡಪ ಅಡಿಕೆ ತೋಟದ ಮಾಲಿಕ ಲಕ್ಷ ಗಟ್ಟಲೆ ದುಡಿತಿಯ ಅನ್ನೋರು ಆದ್ರೆ ಈಗ ಎಲ್ಲಿ ನೋಡಿದರೂ ಅಡಿಕೆ ಅಡಿಕೆ ಅಡಿಕೆ, ಯಾಕೆ ಯಾಕೆ ??


ಕಾರಣಗಳು :

1. ಅಡಿಕೆ ಇಂದ ಬರುವ ಲಾಭ : ಅಡಿಕೆ ಒಂದು ವಾಣಿಜ್ಯ ಬೆಳೆ, ಅಡಿಕೆ ಸಸಿ ನೆಟ್ಟ 5 ರಿಂದ 6 ವರ್ಷಕ್ಕೆ ಫಲ ಸಿಗುತ್ತೆ, ಒಂದು ಸಾರಿ ಅಡಿಕೆ ಕೊಯ್ಲಿ ಗೆ ಬಂದ್ರೆ ಬೇಡ ಅಂದ್ರೂ 3 ರಿಂದ 4 ಲಕ್ಷ ಎಕರೆಗೆ ಗ್ಯಾರಂಟಿ.

2. Maintenance ಜಾಸ್ತಿ ಇದ್ರು ಕೂಡ ದುಡ್ಡಿನ ಮುಂದೆ ಏನು ಇಲ್ಲ ಅಂತ ಈಗಿನ ರೈತರು ಜಾಸ್ತಿ ಒಲವು ಅಡಿಕೆ ಮೇಲೆ ತೋರುತ್ತಿದ್ದಾರೆ ಇದಕ್ಕೆ ಮತ್ತೊಂದು ಕಾರಣ ಸರಕಾರದಿಂದ ಸಿಗುವ ಸಹಾಯಧನ ಅಂದ್ರೆ ನರೇಗಾ ಯೋಜನೆ ಅಡಿಯಲ್ಲಿ ರೈತರಿಗೆ ಕರ್ನಾಟಕ ಸರಕಾರವು ಸಹಾಯಧನ ನೀಡುತ್ತಿದೆ, ರೈತರು ಅಡಿಕೆ ಹಾಕೋಣ ಬಂದ್ರೆ ಬರ್ಲಿ ಬಿಟ್ರೆ ಬಿಡಲಿ - ಏನೇ ಆದ್ರೂ ಸರ್ಕಾರ ಸಹಾಯಧನ ಕೊಡ್ತಾರಲ ನಮಿಗೆ ಏನು ಲಾಸ್ ಆಗೋಲ್ಲ ಅಲ್ವಾ ಅಂತ ರೈತರ ಯೋಚ್ನೆ.

ಇದು ಸುಳ್ಳಲ್ಲ 100% ನಿಜ, ಬಂದ್ರೆ ಬೆಟ್ಟ ಹೋದ್ರೆ ಟಾಟಾ ಅಂತ ಹೇಳ್ತಾರಲ್ಲ ಹೆಂಗೆ, ಈಗಿನ ರೈತರು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ ಅಷ್ಟೇ.


3. Traditional ಬೆಳೆಗಳಿಗಿಂತ ವಾಣಿಜ್ಯ ಬೆಳೆಗಳಿಂದ ದುಡ್ಡು ರೈತರಿಗೆ ಹೆಚ್ಚಾಗಿ ಸಿಗುತ್ತಿದೆ, ಸಿಗ್ಲಿ ಬಿಡ್ರಿ ರೈತರು ಕೋಟಿ ದುಡ್ಡು ಮಾಡಲಿ ಅನ್ನೋದೇ ನನ್ನ ಆಸೆ.

ಸಾಮಾನ್ಯವಾಗಿ ಮಳೆ ಗಾಲ ಬಂದಾಗ ರೈತರು ಹೊಲ ಎಲ್ಲಾ ಉಳಿಮೆ ಮಾಡಿ ಮಾಮೂಲಿ ಮೆಕ್ಕೆಜೋಳ,ಹತ್ತಿ,ಈರುಳ್ಳಿ, ತರಕಾರಿ ಬೆಳೆಯುತ್ತಿದ್ದರು, ಆದ್ರೆ ಬೆಂಬಲ ಬೆಲೆ ಸರಿಯಾಗಿ ರೈತರಿಗೆ ಸಿಗ್ತಾ ಇರಲಿಲ್ಲ , ಎಷ್ಟೇ ಕಷ್ಟ ಬಂದ್ರು ರೈತರು ತಮ್ಮ ಪ್ರಾಮಾಣಿಕವಾಗಿ ಅವ್ರ ಕಾಯಕದಲ್ಲಿ ಮುಳುಗುತ್ತಿದ್ದರು, ಕಷ್ಟ ಪಟ್ಟು ದುಡುದ್ರು ಅವ್ರು ವಾರ್ಷಿಕವಾಗಿ ಮೆಕ್ಕೆಜೋಳ/ಇನ್ನಿತರ ಬೆಳೆ ಯಿಂದ 35000 ದಿಂದ 40000 ವರ್ಗೆ ದುಡಿಯುತ್ತಿದ್ದರು, ಅವ್ರು ಬೀಜ , ಗೊಬ್ಬರಕ್ಕೆ ಹಾಕಿದ ಬಂಡವಾಳ ನೂ ಬರುತ್ತಾ ಇರಲಿಲ್ಲ, ಇದರಿಂದ ರೊಸತ್ತು ಹೋಗಿದ್ದ ರೈತರು ಅಡಿಕೆ ಬೆಳೆಗೆ ಒಲವು ತೋರಿಸಿದರು ಅಷ್ಟೇ.

4. ನಮಗೆ,ನಿಮಗೆ ಗೊತ್ತಿರುವ ಪ್ರಕಾರ ಒಂದು ಎರಡು ಎಕರೆ ಅಡಿಕೆ ತೋಟ ಇದ್ರೆ ಹೆಣ್ಣು ಕೊಡ್ತಾರೆ ಅಂತ ಕೂಡ ಕೆಲವೊಬ್ರು ಯೋಚಿಸಿದ್ದು ಉಂಟು, ಇದು ನಾ ಕಣ್ಣಾರೆ ಕಂಡ ವಿಷಯ, ನಮ್ಮ ಕಡೆ ಇದು ತುಂಬಾ ಆಗಿದೆ.

ಏನೇ ಆಗ್ಲಿ ರೈತರಿಗೆ ಹೆಣ್ಣು ಸಿಗುವಂತಾಗಲಿ ಮುಂದೆ, ಕಲ್ಮಶ ಇಲ್ಲದ ಸ್ವಚ್ಛ ಮನಸ್ಸುಳ್ಳ ವ್ಯಕ್ತಿಗಳು ನಮ್ಮ ರೈತರು.

5. ರೈತರು ನೀರು ಇಲ್ಲ ಅಂದ್ರೂ ಇನ್ನೊಂದು ಬೋರ್ ಕೊರಸಿ ಆದ್ರೂ ಅಡಿಕೆ ತೋಟ ಬದುಕಿಸಿಕೊಳ್ಳುವ ಪ್ರಯತ್ನ ಪಡುತ್ತಿದ್ದಾರೆ ಆದ್ರೆ ಮುಂದೆ ಏನೋ ಕಥೆ ಈ ಅಡಿಕೆಗು ಕೂಡ ಬೆಂಬಲ ಸಿಗದೆ ರೈತರು ಕಂಗಾಲು ಆಗ್ತಾರಾ ಅಂತ ನನ್ ಯೋಚ್ನೆ. ಏನೇ ಆಗ್ಲಿ ಎಲ್ಲರಿಗೂ ಒಳ್ಳೆದು ಆದ್ರೆ ಅಷ್ಟೇ ಸಾಕು, ನೀವು ಎನ್ ಅಂತೀರಾ..?


ರೈತ ಈ ದೇಶದ ಆಸ್ತಿ, ರೈತ ಈ ದೇಶದ ರಾಜ, ರೈತ ತನ್ನ ಜೀವನ ಮುಡಿಪಾಗಿಟ್ಟು ಬೇರೆಯವರ ಹೊಟ್ಟೆ ತುಂಬಸ್ತ ಇದ್ದಾನೆ ಅಂತ ಹೇಳೋಕೆ ಇಷ್ಟ ಪಡ್ತೀನಿ.

ಹೀಗೆ ನಾ ಒಂದು ಕಂಪನಿಯಲ್ಲಿ ಕೆಲ್ಸ ಮಾಡುವಾಗ ಅವತ್ತು ನನ್ನ last working day ಇತ್ತು ಆ ಕಂಪನಿ ಮ್ಯಾನೇಜರ್ ರೈತ ಇಲ್ದೆ ಜೀವನ ಮಾಡ್ಬೋದು ಹಂಗೆ ಹಿಂಗೆ ಅಂತ ಏನೇನೋ ಮತಾಡ್ತಿದ್ದ ಅವತ್ತು ಅವ್ನಿಗೆ ಬೆವರು ಇಲ್ಸಿದ್ದೆ ಕಾರಣ ನಾನು ಒಬ್ಬ ರೈತಾಪಿ ಕುಟುಂಬದಲ್ಲಿ ಹುಟ್ಟಿದವ, ಈಗಲೂ ಕೂಡ ನಾವು ವ್ಯವಸಾಯ ಮಾಡುತ್ತೇವೆ.


ಏನೇ ಆಗ್ಲಿ ರೈತರು ಬೆಳೆಯಬೇಕು ಮತ್ತು ಕೋಟಿಗಳಲ್ಲಿ ಮಾತಾಡಬೇಕು ಅನ್ನೋದು ನನ್ನ ಕನಸು..


ಬ್ಲಾಗ್ ಓದಿದ್ದಕ್ಕೆ ಧನ್ಯವಾದಗಳು, ಇಂತಿ ನಿಮ್ಮ ಗೆಳೆಯ VK😊😊

Comments

Popular posts from this blog

ನೀವು ನಿಮ್ಮ ಹೊಲಕ್ಕೆ ಹನಿ ನೀರಾವರಿ ಮಾಡಬೇಕಾ..? ಹಾಗಿದ್ರೆ ಈ ಬ್ಲಾಗ್ ಪೂರ್ತಿ ಓದಿ

ಹೈನುಗಾರಿಕೆ ನಿಜವಾಗಲೂ ಲಾಭದಾಯಕ ಉದ್ಯಮವೇ..?

ಹೊಸದಾಗಿ ನಿಮ್ಮ ಮನೆಗೆ ಕರೆಂಟ್ ತಗೊಬೇಕಾ? ಎನ್ ಪಾಲಿಸಿ ಇದೆ ಹಂಗಾದ್ರೆ ..?