Posts

ಹೊಸದಾಗಿ ನಿಮ್ಮ ಮನೆಗೆ ಕರೆಂಟ್ ತಗೊಬೇಕಾ? ಎನ್ ಪಾಲಿಸಿ ಇದೆ ಹಂಗಾದ್ರೆ ..?

 ಹಲೋ ಗೆಳೆಯರೇ! ನಮಸ್ತೆ!  ನನ್ನ ಬ್ಲಾಗ್ ಗೆ ಸ್ವಾಗತ, ಸುಸ್ವಾಗತ. ಇವತ್ತು ನಾವು ಹೇಳೋಕೆ ಹೊರಟಿರುವ ವಿಷಯ ಕರೆಂಟ್ ಬಗ್ಗೆ. ಈಗ ಊಹಿಸಿ ನೀವು ನಿಮ್ಮ ಕನಸಿನ ಮನೆ ಕಟ್ಟುಸಿರ್ತಿರ ಬೇರೆ ಜಾಗದಲ್ಲಿ ಅಂದ್ರೆ ನೀವು ಇವಾಗ ಇರುವ ಮನೆ ಕೆಡವಿ ಅದೇ ಜಾಗದಲ್ಲಿ ಬಿಟ್ಟು ಬೇರೆ ನಿಮ್ಮದೇ ಆದೆ ಜಾಗದಲ್ಲಿ ಮನೆ ಕಟ್ಟಿಸಿದಿರ ಅಂದುಕೊಳ್ಳಿ, ಹಾಗಾದ್ರೆ ಅದು ನಮ್ಮ ಮನೆ ಅಲ್ವಾ ಅಲ್ಲಿಗೆ ಕರೆಂಟ್ ಅಂದ್ರೆ ಹಳೆ ಮೀಟರ್ ಹಾಕೋಲ್ವ..? ಕರ್ನಾಟಕ ವಿದ್ಯುತ್ ನಿಗಮದಿಂದ ಕೆಲವು ಮಾನದಂಡಗಳು ಇದಾವೆ, ಅವುಗಳೆಂದರೆ ನೀವು ನಿಮ್ಮ ಹಳೆ ಮನೆ ಕೆಡವಿ ಆದೆ ಜಾಗದಲ್ಲಿ ಹೊಸ ಮನೆ ಕಟ್ಟಿದ್ರೆ ನಿಮ್ಮದು ಹಳೆ ಮೀಟರ್ ಇದ್ರೆ ಅದನ್ನೇ KEB ಅಧಿಕಾರಿಗಳು ಫಿಕ್ಸ್ ಮಾಡ್ತಾರೆ ಆದ್ರೆ.. ನೀವು ನಿಮ್ಮ ಹಳೆ ಜಾಗ ಬಿಟ್ಟು ಬೇರೆ ಜಾಗದಲ್ಲಿ ಹೊಸ ಮನೆ ಕಟ್ಟಿದರೆ ಈ ಕೆಳಗಿನ ಮಾನದಂಡಗಳು ಅಪ್ಲೈ ಆಗುತ್ತವೆ  ಮೊದಲಿನದು, ನೀವು ಕಟ್ಟಿರುವ ಹೊಸ ಮನೆ ಗ್ರಾಮ ಠಾಣೆಗೆ ಸೇರಿದ್ರೆ ನೀವು ಕೇವಲ 3500 ರೂಪಾಯಿಯನ್ನು ಕಟ್ಟಿ ಹೊಸ ಮೀಟರ್ ತಗೊಬಹುದು, ಈ ದುಡ್ಡು 2024 ಅಂದ್ರೆ ಪ್ರತುತವಾಗಿ ನಡೆಯುತ್ತದೆ. ಎರಡನೇಯದು, ನೀವು ನಿಮ್ಮ ಮನೆಯನ್ನು ನಿಮ್ಮ ಹೊಲ ಅಥವಾ ತೋಟದಲ್ಲಿ ಕಟ್ಟಿಸಿದ್ರೆ 100% ಅದು ಗ್ರಾಮ ಪಂಚಾಯಿತಿಗೆ ಸೇರಿರುವುದಿಲ್ಲ,  ಈ ಸಂದರ್ಭದಲ್ಲಿ ನೀವು KEB ಗೆ ಡೆವಲಪ್ಮೆಂಟ್ ಚಾರ್ಜರ್ಸ್ ಅಂತ 7500 ರೂ ಹಾಗೂ ಮೀಟರ್ ಗೆ 3500 ರೂಪಾಯಿ ಕಟ್ಟಬೇಕಾಗುತ್ತದೆ. Incas...

ನೀವು ನಿಮ್ಮ ಹೊಲಕ್ಕೆ ಹನಿ ನೀರಾವರಿ ಮಾಡಬೇಕಾ..? ಹಾಗಿದ್ರೆ ಈ ಬ್ಲಾಗ್ ಪೂರ್ತಿ ಓದಿ

Image
 ಹಲೋ ಗೆಳೆಯರೇ, ನಮಸ್ತೆ ನಮ್ಮ ಈ ಬ್ಲಾಗ್ ಗೆ ಸ್ವಾಗತ, ಸುಸ್ವಾಗತ.. ಬನ್ನಿ ಬನ್ನಿ ಇವತ್ತು ಸರಿಯಾಗೇ ತಿಳಿದುಕೊಳ್ಳೋಣ. ಇವತ್ತಿನ ಕಾಲದ ಮಳೆ ಗೆ ನಮ್ಮ ಎಲ್ಲಾ ರೈತರಿಗೂ ಸಾಕ್ ಸಾಕಾಗಿದೆ ಎನ್ ಮಾಡೋಣ ಹೇಳಿ ಎಲ್ಲಾ ಪ್ರಕೃತಿ ದೇವಿಯ ಮಹಿಮೆ, ಅವ್ಳು ಕೊಟ್ಟಾಗ ನಾವು ಇಸ್ಕೊಬೇಕು ಅಷ್ಟೇ. 100 ಕ್ಕೆ 40% ಜನರು ಇವಾಗ ಬೋರ್ವೆಲ್ ನೀರಾವರಿಯಲ್ಲಿ ತೊಡಗಿದ್ದಾರೆ, ಅವರಿಗೆಲ್ಲ ಬೇಕಾಗಿರೋದು ತುಂಬಾ ಮೇಲೆ ಯಾಕಂದ್ರೆ ಬೇಸಿಗೆಯಲ್ಲಿ ಅವ್ರ ಬೆಳೆಗೆ ನೀರ್ ಬೇಕಲ್ವಾ.. ಈ ವರ್ಷ ಅಂದ್ರೆ 2024ರಲ್ಲಿ ಬಂದಿರೋ ಬರಗಾಲಕ್ಕೆ ಜನ ರೋಸೊತ್ತು ಹೋಗಿದಾರೆ, ಹಾನಿ ನೀರಾವರಿಗೆ ಒಲವು ತೋರಿದ್ದಾರೆ. ಏನೇ ಆಗ್ಲಿ ರೈತರು ನೀರನ್ನು ಮಿತವಾಗಿ ಬಳಸಿ ತಮ್ಮ ಬೆಲೆಯನ್ನು ಉಳಿಸಿಕೊಳ್ಳೋದು ಒಳ್ಳೆದು, ಬನ್ನಿ 1 ಎಕರೆ ಹನಿ ನೀರಾವರಿಗೆ ಎಷ್ಟು ಖರ್ಚು ಆಗುತ್ತೆ ನೋಡೋಣ. ರೈತರು ಗಮನಿಸಬೇಕಾದ ಅಂಶಗಳು, ಹನಿ ನೀರಾವರಿಗೆ ಹೋಗುವ ಮುನ್ನ ಮೊದಲು ತಮ್ಮ ಹೊಲದ ಬೋರ್ವೆಲ್ ನಲ್ಲಿ ಎಷ್ಟು ನೀರಿದೆ ತಿಳ್ಕೊಳ್ಳಿ ನಿಮ್ಮ ಹೊಲದ ಅಳತೆ ಇರಲಿ, ಮೀಟರ್ ಅಲ್ಲಿ ಒಂದು ಅಂದಾಜು ಮಾಡ್ಕೊಳ್ಳಿ ಯಾಕಂದ್ರೆ ಡ್ರಿಪ್ wire ನ ನಿಮ್ಮ ಹೊಲದ ಅಳತೆ ಎಷ್ಟಿದೆಯೋ ಅಷ್ಟೇ ತನ್ನಿ, ಒಂದು 200m or 300m ಜಾಸ್ತಿ ತಂದ್ರೆ ಸಾಕು. ಒಂದು bundle ಡ್ರಿಪ್ wire ಸುಮಾರು 200m ಉದ್ದ ಬರುತ್ತೆ. ನೀವು ಎಷ್ಟು ಕಚ್ಚು ಮಾಡ್ಕೋಬೇಕು ಫಸ್ಟ್ decide ಮಾಡಿ ಎಷ್ಟು ದಪ್ಪ wire ತರ್ತಿರ decide ಮಾಡ್ಕೊಳಿ ಅಂದ್ರೆ...

ಪ್ರಸ್ತುತ ಕರ್ನಾಟಕದಲ್ಲಿ ಏಕೆ ಅಡಿಕೆ ತೋಟದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ..?

 ಹಲೋ ಗೆಳೆಯರೇ, ನಮಸ್ಕಾರ ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ , ಸುಸ್ವಾಗತ ನಾನು ಇವತ್ತಿನ ನನ್ನ ಬ್ಲಾಗ್ ಗೆ ಆಯ್ಕೆ ಮಾಡಿಕೊಂಡಿರುವ ವಿಷಯ ಅಡಿಕೆ. ಯಾಕಂದ್ರೆ ಇತ್ತೀಚಿನ ದಿನದಲ್ಲಿ ಎಲ್ಲಾ ರೈತರು ತೋಟ ಮಾಡಲು ಹೊರಟಿದ್ದಾರೆ, ಕಾರಣ ಏನು? ಯಾಕೆ ಅಷ್ಟು ಒಲವು ಅಡಿಕೆ ಮೇಲೆ? ಬರ ಬಂದ್ರೆ ಹೆಂಗಪ? ರೇಟ್ ಕಮ್ಮಿ ಆದ್ರೆ ಎನ್ ಮಾಡೋದು? ಇವೆಲ್ಲವಕ್ಕೂ ನನಗೆ ಗೊತ್ತಿರುವ ಮಟ್ಟಿಗೆ ಪ್ರಾಮಾಣಿಕವಾಗಿ ಉತ್ತರ ನೀಡುತ್ತೇನೆ, ಬನ್ನಿ ಹಾಗಾದ್ರೆ ತಿಲ್ಕೊಳೋನ. ಅಡಿಕೆ : ಕೆಲವು ವರ್ಷಗಳ ಹಿಂದೆ ಅಡಿಕೆ ತೋಟ ಇದ್ರೆ ಅವ್ರಿಗೆ ಒಂದು ಗತ್ತು ಇತ್ತು, ನೀ ಎನ್ ಬಿಡಪ ಅಡಿಕೆ ತೋಟದ ಮಾಲಿಕ ಲಕ್ಷ ಗಟ್ಟಲೆ ದುಡಿತಿಯ ಅನ್ನೋರು ಆದ್ರೆ ಈಗ ಎಲ್ಲಿ ನೋಡಿದರೂ ಅಡಿಕೆ ಅಡಿಕೆ ಅಡಿಕೆ, ಯಾಕೆ ಯಾಕೆ ?? ಕಾರಣಗಳು : 1. ಅಡಿಕೆ ಇಂದ ಬರುವ ಲಾಭ : ಅಡಿಕೆ ಒಂದು ವಾಣಿಜ್ಯ ಬೆಳೆ, ಅಡಿಕೆ ಸಸಿ ನೆಟ್ಟ 5 ರಿಂದ 6 ವರ್ಷಕ್ಕೆ ಫಲ ಸಿಗುತ್ತೆ, ಒಂದು ಸಾರಿ ಅಡಿಕೆ ಕೊಯ್ಲಿ ಗೆ ಬಂದ್ರೆ ಬೇಡ ಅಂದ್ರೂ 3 ರಿಂದ 4 ಲಕ್ಷ ಎಕರೆಗೆ ಗ್ಯಾರಂಟಿ. 2. Maintenance ಜಾಸ್ತಿ ಇದ್ರು ಕೂಡ ದುಡ್ಡಿನ ಮುಂದೆ ಏನು ಇಲ್ಲ ಅಂತ ಈಗಿನ ರೈತರು ಜಾಸ್ತಿ ಒಲವು ಅಡಿಕೆ ಮೇಲೆ ತೋರುತ್ತಿದ್ದಾರೆ ಇದಕ್ಕೆ ಮತ್ತೊಂದು ಕಾರಣ ಸರಕಾರದಿಂದ ಸಿಗುವ ಸಹಾಯಧನ ಅಂದ್ರೆ ನರೇಗಾ ಯೋಜನೆ ಅಡಿಯಲ್ಲಿ ರೈತರಿಗೆ ಕರ್ನಾಟಕ ಸರಕಾರವು ಸಹಾಯಧನ ನೀಡುತ್ತಿದೆ, ರೈತರು ಅಡಿಕೆ ಹಾಕೋಣ ಬಂದ್ರೆ ಬರ್ಲಿ ಬಿಟ್ರೆ ಬಿಡಲಿ - ಏನೇ ಆದ...

ಒಂದು ಎಕರೆ ಹೊಲದಲ್ಲಿ ಏನೇನೆಲ್ಲಾ ಬೆಳೆಯಬಹುದು..??

 ನಮಸ್ಕಾರ ಗೆಳೆಯರೇ, ನಮ್ಮ ಬ್ಲಾಗ್ ಗೆ ಸ್ವಾಗತ, ಸುಸ್ವಾಗತ. ನಮ್ಮ ಇವತ್ತಿನ ಟಾಪಿಕ್ ಏನೇನ್ ಎಲ್ಲಾ ಬೆಳೆಯಬಹುದು ಒಂದು ಎಕರೆ ಹೊಲದಲ್ಲಿ..? ಇತ್ತೀಚಿನ ದಿನದಲ್ಲಿ ತುಂಬಾ ಜನ ಸಮಗ್ರ ಕೃಷಿಗೆ ಹೆಚ್ಚು ಒಲವು ತೋರುತ್ತಿರುವುದು ಒಂದು ಖುಷಿಯ ವಿಚಾರ, ಹಾಗೆ ಸಮಗ್ರ ಕೃಷಿ ಅಂದ್ರೆ ಏನೇನೋ ಬೆಳೆಯೋದು ಅಲ್ಲ ಪಕ್ಕ ಪ್ಲಾನಿಂಗ್ ಮಾಡಬೇಕು. ನನ್ನ ನೀವು ಕೆಳೋದಾಡ್ರೆ ಒಂದು ಎಕರೆ ಹೊಲದಲ್ಲಿ 5 ರಿಂದ 6 ರೀತಿಯ ವಿವಿಧ ಬೆಳೆಗಳನ್ನು ಬೆಳೆಯಬಹುದು... ಅವು ಯಾವುವು ಅಂದ್ರೆ. ತೆಂಗು (coconut 🥥) ಪೇರಲೆ (Guaua) ಶ್ರೀಗಂಧ ನುಗ್ಗೆ (ತಾತ್ಕಾಲಿಕ ವಾಗಿ) ಪಪ್ಪಾಯ ಇನ್ನ ನೀವು ಡೈರಿ ಫಾರ್ಮ್ ಮಾಡ್ತಿದ್ರೆ ಮೇವು ಕೂಡ ಬೆಳಿಬೋದು 🔥 ಇಷ್ಟೆಲ್ಲ ಬೆಳೆಯಬಹುದಾ..? ಅಂತ ನೀವು ಅಂದುಕೊಳ್ತ ಇದ್ರೆ ಹೌದು ಇದು ಸಾದ್ಯ, ಮನಸಿದ್ದರೆ ಮಾರ್ಗ ಅಂತ ದೊಡ್ಡೋರು ಹೇಳಿಲ್ವ, ಏನೇ ಮಾಡಿದ್ರೂ ಶ್ರದ್ಧೆ ಭಕ್ತಯಿಂದ ನಾವು ಕೆಲಸ ಮಾಡಿದ್ರೆ ಆ ಭೂಮಿತಾಯಿ ಯಾರನ್ನು ಕೈ ಬಿಡೋಲ್ಲ ಅನ್ನೋದು ನನ್ನ ನಂಬಿಕೆ.. ನಿಮ್ದು..?? ಹೇಗೆ ಪ್ಲಾನ್ ಮಾಡಬೇಕು ಅಂತ ಯೋಚ್ನೆ ಮಾಡ್ತಾ ಇದ್ದೀರಾ.. ಇವಾಗ ಹೇಳ್ತೀನಿ ನೋಡಿ ಒಂದು ಎಕರೆ ಹೊಲ ಅಂದ್ರೆ 40 ಗುಂಟೆ. ಹೀಗೆ ನಿಮ್ಮ ಜಮೀನು ಯಾವ ಆಕಾರದಲ್ಲಿ ಇದೆ ಅಂತ ಮೊದಲು ನೋಡ್ಕೊಳ್ಳಿ 1. 30 feet*30feet ಅಲ್ಲಿ ನೀವು ತೆಂಗು ಹಾಕಬಹುದು ಅಂದಾಜು 50 ರಿಂದ 60 ಗಿಡಗಳು ನಾವು ನಾಟಿ ಮಾಡಬಹುದು. 2. 7 feet* 7feet ಒಂದು ಸಾಲು ಮಾಡಿದ್ರೂ ನೀವು...

ಶ್ರೀಗಂಧ ಕೃಷಿ ಮಾಡಬೇಕಾ.. ಹಾಗಾದ್ರೆ ಈ ಬ್ಲಾಗ್ ಪೂರ್ತಿ ಓದಿ

 ಹಲೋ ಗೆಳೆಯರೇ ! ನಮಸ್ಕಾರ ಈ ಬ್ಲಾಗ್ ಓದಲು ಬಂದಿರುವ ನಿಮಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು. ಶ್ರೀಗಂಧ, ನಮಗೆ ಗೊತ್ತಿರುವ ಹಾಗೆ ತುಂಬಾ ಬೆಲೆ ಬಾಳುವ ಒಂದು ಮರ, ಇದನ್ನ ಬೆಳೆಯೋದು ಹೇಗೆ, ಅರಣ್ಯ ಇಲಾಖೆ ಇಂದ ಪರ್ಮಿಷನ್ ಬೇಕಾ.? ಅರಣ್ಯ ಇಲಾಖೆ ನಮಿಗೆ ಏನು ಕೊಡುತ್ತೆ.? ಗನ್ ಕೊಡುತ್ತಾ ನಮಿಗೆ ಕಾವಲಿಗೆ.? ಇವೆಲ್ಲ ಡೌಟ್ ನಿಮಗೆ ಇದ್ದೇ ಇದೆ ಅಲ್ವಾ, ಬನ್ನಿ ಮತ್ತೆ ತಿಲ್ಕೊಳೋಣ.. ಗಂಧದಲ್ಲಿ ಎರಡು ಜಾತಿ 1. Red sandal 2. White sandal ಅಂದ್ರೆ ರಕ್ತ ಚಂದನ ಮತ್ತು ಶ್ರೀಗಂಧ. ಈ ಎರಡೂ ಜಾತಿಯ ಮರಕ್ಕೆ ತುಂಬಾ ಬೆಲೆ, ಆದ್ರೆ ಸ್ವಲ್ಪ ವರ್ಷಗಳ ಕಾಲ ನಾವು ಕಾಯಬೇಕಾಗುತ್ತದೆ. ದುಡ್ಡು ಬೇಕು ಅಲ್ವಾ ಬೇಕು ಅಂದ್ರೆ ಕಾಯಲೇ ಬೇಕು ಅಂಡ್ ರಿಸ್ಕ್ ತಗೋಬೇಕು, ಜೀವನದಲ್ಲಿ ರಿಸ್ಕ್ ಇಲ್ಲ ಅಂದ್ರೆ ಎಂತಾ ಅಲ್ವಾ? ಸರಿ ಏನು ಬೇಕು ಶ್ರೀಗಂಧ ಬೆಳೆಯೋಕೆ ನೋಡೋಣ ಬನ್ನಿ ಮಣ್ಣು : ಶ್ರೀಗಂಧ ಎಲ್ಲಾ ರೀತಿಯ ಮಣ್ಣಿನಲ್ಲೂ ಬೆಳೆಯುತ್ತೆ ಇದಕ್ಕೆ ಇದೆ ಮಣ್ಣು ಬೇಕು ಅಂತ ಏನಿಲ್ಲ ಆದ್ರೆ ಹೆಚ್ಚು ಸೂಕ್ತವಾದ ಮಣ್ಣು ಮರಳು ಮಿಶ್ರಿತ ಕೆಂಪು ಮಣ್ಣು. ಶ್ರೀಗಂಧ ಸಸಿಗಳು ಎಲ್ಲಿ ಸಿಗುತ್ತೆ? Usually ಶ್ರೀಗಂಧ ಮರಗಳು ಅರಣ್ಯ ಇಲಾಖೆ ಯಲ್ಲಿ ಸಿಗುತ್ತೆ ಅಥವಾ ಖಾಸಗಿ ನರ್ಸರಿ ಅಲ್ಲಿ ಸಿಗುತ್ತವೆ. Okay, ಒಂದು ಸಸಿಗೆ ಎಷ್ಟು ದುಡ್ಡು? ಅರಣ್ಯ ಇಲಾಖೆಯಲ್ಲಿ ಪ್ಯಾಕೇಟ್ ಮೇಲೆ ಅವಲಂಬಿತ ಅಂದ್ರೆ ಚಿಕ್ಕ ಪ್ಯಾಕೇಟ್ ಅಲ್ಲಿನ ಸಸಿ ತಂದ್ರೆ 8rs ಹಾಗೂ ದೊಡ್ಡ...

ಹೈನುಗಾರಿಕೆ ನಿಜವಾಗಲೂ ಲಾಭದಾಯಕ ಉದ್ಯಮವೇ..?

 ಹಲೋ ಗೆಳೆಯರೇ ನಮಸ್ಕಾರ.. ತಮ್ಮೆಲ್ಲರಿಗೂ ಸ್ವಾಗತ, ಸುಸ್ವಾಗತ ನನ್ನ ಬ್ಲಾಗ್ ಗೆ... ನಾ ಇವತ್ತು ನಿಮ್ ಜೊತೆ ಹಂಚಿಕೊಳ್ಳಲು ಹೊರಟಿರುವ ವಿಷಯ "ಹೈನುಗಾರಿಕೆ" ನಮಗೆ ಮತ್ತು ಎಲ್ಲರಿಗೂ ಒಂದು ಆಸೆ ಇದ್ದೇ ಇರುತ್ತೆ ನಾವು ನಮ್ಮ ಸ್ವಂತ ಬ್ಯುಸಿನೆಸ್ ಮಾಡಬೇಕು ಅಂತ ಆದ್ರೆ ಅದು ಎಲ್ಲರಿಗೂ ಸಾದ್ಯ ಆಗೋಲ್ಲ.. ಯಾಕಂದ್ರೆ... 1. ಕೆಲವೊಬ್ಬರಿಗೆ ದುಡ್ಡು ಇರುತ್ತೆ ಆದ್ರೆ ಟೈಮ್ ಇರೋಲ್ಲ  2. ಕೆಲವೊಬ್ಬರಿಗೆ ಟೈಮ್ ಇರುತ್ತೆ ಆದ್ರೆ ಮಾಡೋಕೆ ದುಡ್ಡು ಇರೋಲ್ಲ ಅದೇ ಏನೋ ಹೇಳ್ತಾರಲ್ಲ ಹಲ್ಲಿದ್ದೊನಿಗೆ ಕಡಲೆ ಇರೋಲ್ಲ, ಕಡಲೆ ಇದ್ದೊನಿಗೆ ಹಲ್ಲು ಇರೋಲ್ಲ ಅಂತ😜😅 ಏನೋ ಬಿಡಿ ಪಾ ಅವೆಲ್ಲ ಇವಾಗ ಯಾಕೆ.. ನಮ್ಮ ಮುಖ್ಯವಾದ ಟಾಪಿಕ್ ಗೆ ಬರೋಣ.. ಹೈನುಗಾರಿಕೆ : ≠================ 1. ಹೌದು ಹೈನುಗಾರಿಕೆ ಲಾಭದಾಯಕ.. ಆದ್ರೆ ಬೇಕಾಗಿರೋದು ಡೆಡಿಕೇಶನ್ ಅಂಡ್ ಪರಿಶ್ರಮ 2. ಇಲ್ಲ ಇಲ್ಲ ಹೈನುಗಾರಿಕೆ ಲಾಭದಾಯಕ ಅಲ್ಲ, ಯಾಕಂದ್ರೆ ಡೆಡಿಕೇಶನ್ ಇಲ್ಲದೆ ಬರೀ blind ಆಗಿ ಸ್ಟಾರ್ಟ್ ಮಾಡೋದ್ರಿಂದ, ನಾವು ಏನೇ ಒಂದು ಬ್ಯುಸಿನೆಸ್ ಮಾಡ್ತೀವಿ ಅಂದ್ರೆ ಮೊದಲು ಪೂರ್ವಸಿದ್ಧತೆ ಬಹಳ ಮುಖ್ಯ 3. ಹಾಗಾದ್ರೆ,, ಎನ್ ಪೂರ್ವಸಿದ್ಧತೆ ಮಾಡ್ಕೋಬೇಕು? ಮೊದಲು ನಾವು ತಿಳ್ಕೊಬೇಕಾಗಿರೋದು ರಾಸುಗಳ ಬಗ್ಗೆ ಅಂದ್ರೆ ನಾವು ಯಾವ ರಾಸುಗಳನ್ನು ಸಾಕಬೇಕು ಮತ್ತೆ ಅವುಗಳ ವಿಶೇಷತೆ ಏನು? ಎಷ್ಟು ಹಾಲು ನೀಡುತ್ತೆ? ಯಾವ ರೀತಿ ಅವುಗಳನ್ನ ನೋಡ್ಕೋಬೇಕು ಅಂತ. ದನದ ಕೊಟ್ಟಿಗೆ :...